Adah Sharma: ಕೇರಳ ಸ್ಟೋರಿ ವಿಚಾರದಲ್ಲಿ ಬಾರಿ ಎಗರಾಡುತ್ತಿದ್ದ ಕಮಲ್ ಹಾಸನ್ ಗೆ ಸರಿಯಾಗಿಯೇ ಠಕ್ಕರ್ ಕೊಟ್ಟ ಅದಾ ಶರ್ಮಾ- ಭೇಷ್ ಎಂದ ನೆಟ್ಟಿಗರು.
Adah Sharma: ಈ ವರ್ಷ ನಮ್ಮ ದೇಶದಲ್ಲಿ ಅತಿಹೆಚ್ಚು ಚರ್ಚೆಯಗಿದ್ದು ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಬಗ್ಗೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ, ಇಫು ಕೇರಳ (Kerala) ರಾಜ್ಯದ ಹುಡುಗಿಯರು ಆಸಿಸ್ ಗೆ ಸೇರಿದ ನೈಜ ಘಟನೆ ಆಧಾರಿತ ಸಿನಿಮಾ ಎಂದು ಗೊತ್ತಾಗುತ್ತಿದ್ದ ಹಾಗೆಯೇ ಈ ಸಿನಿಮಾ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದವು. ಹಲವರು ಇದು ಸುಳ್ಳು ಎಂದು ಹೇಳಿದರು.
ದೊಡ್ಡ ದೊಡ್ಡ ರಾಜಕಾರಣಿಗಳು, ಸಿನಿಮಾ ಕಲಾವಿದರು ಸಹ ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸಿದರು. ಇದೆಲ್ಲವೂ ಸುಳ್ಳು, ಈ ಕಥೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದರು. ನಟ ಕಮಲ್ ಹಾಸನ್ (Kamal Hasan) ಅವರು ಸಹ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸಿದರು. ಆದರೆ ಆ ಯಾವುದೇ ಮಾತುಗಳು ಕೂಡ, ಸಿನಿಮಾ ಯಶಸ್ಸಿನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ದಿ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಇದನ್ನು ಓದಿ..Tomato Rate: ರಾಜ್ಯ ಮಾಡದೆ ಇದ್ದರೇ ಏನು- ಟೊಮೊಟೊ ಬೆಲೆಗೆ ಕಡಿವಾಣ ಹಾಕಲು ಮೋದಿ ಎಂಟ್ರಿ- ಕೇಂದ್ರ ಏನು ಮಾಡುತ್ತಿದೆ ಗೊತ್ತೇ??
ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು, ಒಳ್ಳೆಯ ರೀತಿಯಲ್ಲಿ ಹಣಗಳಿಕೆ ಮಾಡಿತು. ಈ ಸಿನಿಮಾ ಬಗ್ಗೆ ಟೀಕೆ ಮಾಡಿದವರ ಬಗ್ಗೆ ಈಗ ನಟಿ ಅದಾ ಶರ್ಮ (Adah Sharma) ಅವರು ಮಾತನಾಡಿದ್ದಾರೆ, ಅದಾ ಶರ್ಮ (Adah Sharma) ಅವರಿಗೆ ಈ ಸಿನಿಮಾ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಪಾಲ್ಗೊಂಡಾಗ, ಈ ರೀತಿ ಟೀಕೆ ಮಾಡಿದ ಸ್ಟಾರ್ ಹೀರೋಗಳಿಗೆ ಟಾಂಗ್ ಕೊಟ್ಟಿದ್ದಾರೆ. Adah Sharma ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..
“ಹೆಸರಾಂತ ಹೀರೋಗಳಿಗೆ ನಮ್ಮ ಸಿನಿಮಾ ಯಶಸ್ಸನ್ನು ಸಹಿಸಲು ಆಗಲಿಲ್ಲ..ನಮ್ಮ ದೇಶದಲ್ಲಿ ಎಲ್ಕರಿಗೂ ಕೂಡ ವಾಕ್ ಸ್ವಾತಂತ್ರ್ಯ ಇದೆ.. ನಮ್ಮಲ್ಲಿ ಒಂದು ಸಿನಿಮಾ ನೋಡದೆ ಇದ್ದರು ಸಹ, ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಹಾಗೆ ಮಾಡಿ ಜನರು ಸಿನಿಮಾ ನೋಡದ ಹಾಗೆ ತಡೆಯುವ ಹಾಗೆ ಮಾಡುತ್ತಾರೆ. ಯಾವ ವ್ಯಕ್ತಿಯ ಬಗ್ಗೆ ಅಥವಾ ಸಿನಿಮ ಬಗ್ಗೆ ಯಾರು ಏನು ಬೇಕಾದರೂ ಮಾತನಾಡಬಹುದು. ಅಂಥ ಹೇಳಿಕೆಗಳನ್ನು ಕೊಟ್ಟ ಮೇಲೆ ಅವರು ಆರಾಮಾಗಿಯೇ ಇರುತ್ತಾರೆ. ಇದನ್ನು ಓದಿ..News: ಕೊನೆಗೂ ಗಟ್ಟಿ ನಿರ್ಧಾರ- ಮೈಸೂರ್ ಎಕ್ಸ್ಪ್ರೆಸ್ ವೆ ನಲ್ಲಿ ಬಾಲ ಬಿಚ್ಚುವವರಿಗೆ ಶಾಕ್- ಏನಾಗಿದೆ ಗೊತ್ತೇ?
ನನ್ನ ಭಾರತ ದೇಶದ ಸೌಂದರ್ಯ ಇದು, ನನ್ನ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ..ಇಲ್ಲಿ ಬೇರೆ ಬೇರೆ ಯೋಚಿಸುವ ಮನಸ್ಸು ಇರುವವರು ಜೊತೆಯಾಗಿ ಜೀವನ ಜೀವನ ನಡೆಸುತ್ತಾರೆ.. ಹೆಸರಾಂತ ನಟರು ನಮ್ಮ ಸಿನಿಮಾ ಬಗ್ಗೆ ಅವರವರ ನಿಲುವುಗಳನ್ನು ತಿಳಿಸಿದ ಮೇಲು ಕೂಡ ಜನರು ಕೇರಳ ಸ್ಟೋರಿ ಸಿನಿಮಾ ನೋಡುವುದನ್ನು ನಿಲ್ಲಿಸಲಿಲ್ಲ, ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಸಪೋರ್ಟ್ ಮಾಡಿದರು. ಇದು ನಿಜಕ್ಕು ಅದ್ಭುತ..” ಎಂದು ಹೇಳಿದ್ದಾರೆ ನಟಿ ಅದಾ ಶರ್ಮ (Adah Sharma). ಇದೀಗ ಈ ಮಾತುಗಳು ವೈರಲ್ ಆಗುತ್ತಿದೆ. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.