Neer Dose Karnataka
Take a fresh look at your lifestyle.

Telsa India: ಭಾರತೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಟೆಸ್ಲಾ- ಕೇವಲ 20 ಲಕ್ಷಕ್ಕೆ ಹೊಸ ಕಾರು, ಎಲಾನ್ ಪ್ಲಾನ್ ಕಂಡು ಶೇಕ್ ಆದ ಕಾರು ಕಂಪನಿಗಳು

Telsa India: ಟೆಸ್ಲಾ (Telsa India) ಕಂಪನಿಯಿಂದ ಎಲೆಕ್ಟ್ರಿಕ್ ಕಾರ್ ಯಾವಾಗ ಬರುತ್ತದೆ ಎಂದು ಕಾಯುತ್ತಿರುವವರಿಗೆ ಈಗ ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ, ಬಹಳ ವರ್ಷಗಳ ನಂತರ, ಎಲಾನ್ ಮಸ್ಜ್ (Elon Musk) ಅವರ ಟೆಸ್ಲಾ ಕಂಪನಿಯು (Telsa India) ವಾರ್ಷಿಕವಾಗಿ 5 ಲಕ್ಷ ವಾಹನ ತಯಾರಿಸುವ ಸಾಮರ್ಥ್ಯ ಹೊಂದಿರುವ ಭಾರತದಲ್ಲಿ ಕಾರ್ ಫ್ಯಾಕ್ಟರಿ ಶುರು ಮಾಡುವ ಬಗ್ಗೆ ಭಾರತ ಸರ್ಕಾರದ ಜೊತೆಗೆ ಚರ್ಚೆ ನಡೆಸುತ್ತಿದೆ. ಎಲಾನ್ ಮಸ್ಕ್ ಇತ್ತೀಚೆಗೆ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದಾಗ, ಭಾರತದಲ್ಲಿ ಉತ್ಪಾದನಾ ಘಟಕ ಶುರು ಮಾಡುವಸ್ ಬಗ್ಗೆ ಹೂಡಿಕೆ ಮಾಡುವ ಬಗ್ಗೆ ತಿಳಿಸಿದ್ದರು.

ಮಾಧ್ಯಮಗಳು ವರದಿ ಮಾಡಿರುವ ಹಾಗೆ ಟೆಸ್ಲಾ (Telsa India) ಮತ್ತು ಭಾರತ ಸರ್ಕಾರದ ನಡುವೆ ಮಾತುಕತೆ ನಡೆದಿದ್ದು, ಅದು ಫೈನಲ್ ಸ್ಟೇಜ್ ನಲ್ಲಿದೆ ಎಂದು ಮಾಹಿತಿ ಸಿಕ್ಕಿದೆ. ಈ ವರದಿಯ ಪ್ರಕಾರ, ಟೆಸ್ಲಾ ಸಂಸ್ಥೆ ಭಾರತದಲ್ಲಿ ಉತ್ಪಾದನೆ ಘಟಕ ಸ್ಥಾಪಿಸುವುದು ಮಾತ್ರವಲ್ಲ, ಚೈನಾ (China) ರೀತಿಯಲ್ಲಿ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತ ದೇಶವನ್ನು ರಫ್ತು ಕೇಂದ್ರವಾಗಿ ಡೆವೆಲಪ್ ಮಾಡುವ ಪ್ಲಾನ್ ಹೊಂದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕಿಲ್ಲ. ಇದನ್ನು ಓದಿ..Realme Earbuds: ಬರೋಬ್ಬರಿ 50% ಡಿಸ್ಕೌಂಟ್ ನೊಂದಿಗೆ ಬಂದಿದೆ ಇಯರ್ ಬಡ್ಸ್- ಮಸ್ತ್ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಟೆಸ್ಲಾ ಕಂಪನಿ ಭಾರತದಲ್ಲಿ (Tesla India) ಶುರು ಮಾಡಬೇಕು ಎಂದುಕೊಂಡಿರುವ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ನಲ್ಲಿ ಸುಮಾರು 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲದೆ, ಟೆಸ್ಲಾ ಸಂಸ್ಥೆಯ (Telsa India) ಎಲೆಕ್ಟ್ರಿಕ್ ಕಾರ್ ಗಳ ಬೆಲೆ 20 ಲಕ್ಷ ಆಗಬಹುದು ಎನ್ನಲಾಗಿದೆ. ಟೆಸ್ಲಾ ಸಂಸ್ಥೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜೊತೆಗೆ ಚರ್ಚೆ ನಡೆಸುತ್ತಿದ್ದು, ಸರ್ಕಾರದ ಜೊತೆಗೆ ಒಳ್ಳೆಯ ಒಪ್ಪಂದ ಆಗಬಹುದು ಎನ್ನಲಾಗಿದೆ. ಇನ್ನು ಈ ಬಗ್ಗೆ ಜನರಿಗೂ ತಿಳಿಸಲಾಗಿದ್ದು, ಟೆಸ್ಲಾ ಸಂಸ್ಥೆಯು ತಮ್ಮ ಕಂಪನಿಯ, ಆಟೋ ಪಾರ್ಟ್ಸ್, ಎಲೆಕ್ಟ್ರಾನಿಕ್ಸ್ ಸೀರೀಸ್ ಗಳನ್ನು ಭಾರತಕ್ಕೆ ತರುವಲ್ಲಿ, ತೆರಿಗೆ ವಿನಾಯಿತಿ ಪಡೆಯುವ ಸಾಧ್ಯತೆ ಇದೆ ಎಂದು ಕೂರ ತಿಳಿಸಿದೆ.

ಟೆಸ್ಲಾ ಕಂಪನಿ ಭಾರತದಲ್ಲಿ (Telsa India) ತಮ್ಮದೇ ಆದ ಆಟೋ ಪಾರ್ಟ್ಸ್ ಕಾಂಪೋನೆಂಟ್ ಸೀರೀಸ್ ಶುರು ಮಾಡಲು ಬಯಸಿದೆ. ಆದರೆ ಭಾರತ ಸರ್ಕಾರ ನಮ್ಮ ದೇಶದಲ್ಲಿರುವ ಆಟೋ ಯೂನಿಟ್ ಇಂದ ಪೂರೈಕೆ ಮಾಡುವ ಮೌಲ್ಯಮಾಪನ ಮಾಡಬೇಕು ಎಂದು ಟೆಸ್ಲಾ ಸಂಸ್ಥೆಯನ್ನು (Telsa India) ಕೇಳಿದೆ. ನರೇಂದ್ರ ಮೋದಿ ಅವರು ಅಮೆರಿಕಾ ಪ್ರವಾಸಕ್ಕೆ ಹೋಗಿದ್ದಾಗ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಸಭೆಯಲ್ಲಿ ಮಾತನಾಡಿದ್ದರು. “ನರೇಂದ್ರ ಮೋದಿ ಅವರಿಗೆ ಭಾರತದ ಬಗ್ಗೆ ಕಾಳಜಿ ಇದೆ, ಭಾರತದಲ್ಲಿ ಹೂಡಿಕೆ ಮಾಡಲು ಟೆಸ್ಲಾ ಸಂಸ್ಥೆಯನ್ನು ಪ್ರೋತ್ಸಾಹಿಸಿದ್ದಾರೆ.. ಇದನ್ನು ಓದಿ..News: ಕೊನೆಗೂ ಗಟ್ಟಿ ನಿರ್ಧಾರ- ಮೈಸೂರ್ ಎಕ್ಸ್ಪ್ರೆಸ್ ವೆ ನಲ್ಲಿ ಬಾಲ ಬಿಚ್ಚುವವರಿಗೆ ಶಾಕ್- ಏನಾಗಿದೆ ಗೊತ್ತೇ?

ಎಂದು ಎಲಾನ್ ಮಾಸ್ಕ್ ಹೇಳಿದ್ದರು. ಹಾಗೆಯೇ ತಾವು ನರೇಂದ್ರ ಮೋದಿ ಅವರ ಅಭಿಮಾನಿ ಎಂದು ಕೂಡ ಹೇಳಿಕೊಂಡಿದ್ದರು. ವಿಶ್ವದ ಬೇರೆ ದೇಶಕ್ಕಿಂತ ಉತ್ತಮ ಭವಿಷ್ಯ ಹೊಂದಿದೆ ಹಾಗೂ ಅವಕಾಶ ಹೊಂದಿದೆ ಎಂದಿದ್ದರು ಎಲಾನ್ ಮಸ್ಕ್. ಈ ಸಭೆ ಬಳಿಕ ಭಾರತದಲ್ಲಿ ಟೆಸ್ಲಾ (Telsa India) ಸಂಸ್ಥೆಯ ಆಗಮನದ ಬಗ್ಗೆ ಒಂದು ಕ್ಲಿಯರ್ ಪಿಕ್ಚರ್ ಸಿಕ್ಕಿದೆ. ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ಗೊತ್ತಾಗಬೇಕಿದ್ದು, ಹೊಸ ಅಪ್ಡೇಟ್ ಗಾಗಿ ಕಾಯಬೇಕಿದೆ. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.