Om Prakash: ಮತ್ತೆ ವಾಪಸ್ಸು ಬರಲು ಸಿದ್ದವಾದ ಓಂ ಪ್ರಕಾಶ್- ಅದು ಮೂವರು ನಾಯಕಿಯರು. ಯಾರು ಎಂದು ತಿಳಿದರೆ ಖುಷಿ ಪಟ್ಟು ಎರಡು ಸ್ಟೆಪ್ ಹಾಕ್ತಿರಾ.
Om Prakash: ಕನ್ನಡ ಚಿತ್ರರಂಗಕ್ಕೆ ಕೆಲವು ಅದ್ಭುತ ಸಿನಿಮಾಗಳನ್ನು ಕೊಟ್ಟವರು ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash). ಇವರ ಸಿನಿಮಾಗಳು ಇಂದಿಗೂ ಇಲ್ಲರ ಫೇವರೆಟ್. ಶಿವಣ್ಣ (Shiva Rajkumar) ಅವರೊಡನೆ ಮಾಡಿದ ಎಕೆ 47 ಸಿನಿಮಾ ಎಷ್ಟು ದೊಡ್ಡ ಮಟ್ಟದ ಹಿಟ್ ಆಗಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ನಿರ್ದೇಶಕನಾಗಿ ಮತ್ತು ನಾಯಕನಾಗಿ ಓಂ ಪ್ರಕಾಶ್ ರಾವ್ (Om Prakash) ಅವರು ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಆದರೆ ಓಂ ಪ್ರಕಾಶ್ ರಾವ್ (Om Prakash) ಅವರು ಒಂದು ಸಿನಿಮಾ ನಿರ್ದೇಶನ ಮಾಡಿ ಬಹಳ ಸಮಯವೇ ಆಗಿದೆ. ಸಾಕಷ್ಟು ವರ್ಷಗಳಿಂದ ಇವರು ಸಿನಿಮಾ ನಿರ್ದೇಶನ ಮಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇತ್ತು. ಇದೀಗ ಓಂ ಪ್ರಕಾಶ್ ರಾವ್ (Om Prakash) ಅವರು ನಿರ್ದೇಶಕನಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ಮಹಿಳಾ ಪ್ರಧಾನ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ ಎನ್ನುವುದು ವಿಶೇಷವಾಗಿದೆ. ಇದನ್ನು ಓದಿ..Actress Ashwini: ಜೀವನದಲ್ಲಿ ಹೊಸ ಹೆಜ್ಜೆ ಹಾಕುತ್ತಿರುವ ಗಟ್ಟಿಮೇಳ ಅಶ್ವಿನಿ- ಅಭಿಮಾನಿಗಳಿಗೆ ಮಾತ್ರ ಬೇಸರ.
ಓಂ ಪ್ರಕಾಶ್ ರಾವ್ (Om Prakash) ಅವರು ನಿರ್ದೇಶನ ಮಾಡಲಿರುವ ಈ 49ನೇ ಸಿನಿಮಾ ಹೆಸರು ಫೀನಿಕ್ಸ್. ಈ ಸಿನಿಮಾದಲ್ಲಿ ಮೂವರು ಹೀರೋಯಿನ್ ಗಳು ಇರಲಿದ್ದಾರಂತೆ. ಆಗಸ್ಟ್ ನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಈ ಸಿನಿಮಾದಲ್ಲಿ ನಿಮಿಕಾ ರತ್ನಾಕರ್, ಶಿಲ್ಪಾ ಶೆಟ್ಟಿ ಮತ್ತು ಕೃತಿಕಾ ಲೋಬೊ ನಾಯಕಿಯರಾಗಿದ್ದಾರೆ. ತ್ರಿಷಾ ಪ್ರಕಾಶ್ ಅವರು ಶ್ರೀ ಗುರು ಚಿತ್ರಾಲಯ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಭಾಸ್ಕರ್ ಶೆಟ್ಟಿ, ಪ್ರತಾಪ್ ಮತ್ತು ಜಗದೀಶ್ ಅವರು ನಟಿಸಲಿದ್ದಾರೆ.
ವಿಲ್ಲನ್ ಆಗಿ ಪ್ರದೀಪ್ ರಾಹುತ್ ಅವರು ನಟಿಸಲಿದ್ದಾರೆ. ಅನಿಲ್ ಕುಮಾರ್, ಸ್ವಸ್ತಿಕ್ ಶಂಕರ್ ಮತ್ತು ಇನ್ನಿತರರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾ ಶೂಟಿಂಗ್ ಆಗಸ್ಟ್ ನಲ್ಲಿ ಶುರುವಾಗುತ್ತದೆ. ಬೆಂಗಳೂರು ಮತ್ತು ವಿದೇಶ ಎರಡು ಕಡೆ ಶೂಟಿಂಗ್ ನಡೆಯಲಿದೆಯಂತೆ. ಜರ್ಮನಿ ಮತ್ತು ಆಸ್ಟ್ರಿಯಾ, ಈ ಎರಡು ಕಡೆ ಶೂಟಿಂಗ್ ನಡೆಯಲಿದೆ ಎಂದು ಖುದ್ಧು ಓಂ ಪ್ರಕಾಶ್ ರಾವ್ ಅವರೇ ಮಾಹಿತಿ ನೀಡಿದ್ದಾರೆ. ಇದನ್ನು ಓದಿ..Seetha Rama Serial: ಸೀತಾರವರನ್ನು ಮದುವೆಯಾಗುವ ಪ್ಲಾನ್ ಹಾಕಿರುವ ಕ್ರಿಮಿನಲ್ ಲಾಯರ್- ಅಸಲಿ ಉದ್ದೇಶವೇನು ಗೊತ್ತೇ? ಖತರ್ನಾಕ್ ಪ್ಲಾನ್.

ಈ ಸಿನಿಮಾಗೆ ಸುಬ್ರಮಣಿ ಅವರು ಕಥೆ ಬರೆದಿದ್ದರೆ, ಓಂ ಪ್ರಕಾಶ್ ರಾವ್ ಅವರು ಚಿತ್ರಕಥೆ ಬರೆದಿದ್ದಾರೆ., ಎಂಎಸ್ ರಮೇಶ್ ಅವರು ಡೈಲಾಗ್ಸ್ ಬರೆದಿದ್ದಾರೆ. ಸಾಧು ಕೋಕಿಲಾ ಅವರ ಮ್ಯೂಸಿಕ್ ಸಿನಿಮಾದಲ್ಲಿ ಇರಲಿದೆ. ರವಿಕುಮಾರ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಲಕ್ಷ್ಮಣ್ ರೆಡ್ಡಿ ಅವರು ಎಡಿಟಿಂಗ್ ಜೊತೆಗೆ ವಿಜಯನ್ ಅವರು ಆಕ್ಷನ್ ಡೈರೆಕ್ಟರ್ ಆಗಿದ್ದಾರೆ. ಓಂ ಪ್ರಕಾಶ್ ರಾವ್ (Om Prakash) ಅವರ ಬರ್ತ್ ಡೇ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಇದನ್ನು ಓದಿ..Business Idea: ಹಳ್ಳಿಯಲ್ಲಿಯೇ ಇದ್ದು ಲಕ್ಷ ಲಕ್ಷ ಗಳಿಸುವ ಟಾಪ್ ಬಿಸಿನೆಸ್ ಗಳು ಯಾವುವು ಗೊತ್ತೇ? ಇವುಗಳಿಗಿಂತ ಬೆಸ್ಟ್ ಮತ್ತೊಂದಿಲ್ಲ.