Neer Dose Karnataka
Take a fresh look at your lifestyle.

Cheapest Automatic Cars: ಅತಿ ಕಡಿಮೆ ಬೆಲೆಗೆ ಸಿಗುವ ಆಟೋಮ್ಯಾಟಿಕ್ ಕಾರ್ ಗಳು- ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.

Cheapest Automatic Cars Available in India: ನಮಸ್ಕಾರ ಸ್ನೇಹಿತರೇ ಇಂದಿನ ಲೇಖನಿ ಖಂಡಿತವಾಗಿ ಕಾರನ್ನು ಚಲಾಯಿಸಲು ಗೊತ್ತಿರುವವರಿಗೆ ಹಾಗೂ ಉತ್ತಮ ಕಾರುಗಳನ್ನು ಖರೀದಿಸುವಂತಹ ಆಸಕ್ತಿ ಇರುವರಿಗೆ ಖಂಡಿತ ಗೊತ್ತಾಗುತ್ತದೆ. ಹೌದು ಮ್ಯಾನ್ವಲ್ ಕಾರ್ ಗಳಿಗಿಂತ ಹೆಚ್ಚಾಗಿ ಆಟೋಮೆಟಿಕ್ ಕಾರ್(Automatic cars) ಗಳು ಸಾಕಷ್ಟು ಸುಲಭವಾಗಿರುತ್ತವೆ. ಯಾಕೆಂದರೆ ಇಲ್ಲಿ ಪದೇ ಪದೇ ಗೇರ್ ಚೇಂಜ್ ಮಾಡುವಂತಹ ಅವಶ್ಯಕತೆ ಇರುವುದಿಲ್ಲ ಹಾಗೂ ಟ್ರಾಫಿಕ್ ನಲ್ಲಿ ಕೂಡ ಇದು ಸಾಕಷ್ಟು ಕೆಲಸಕ್ಕೆ ಬರುತ್ತದೆ. ಬನ್ನಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಆಟೋಮೆಟಿಕ್ ಕಾರ್ ಗಳ ಬಗ್ಗೆ ತಿಳಿದುಕೊಳ್ಳೋಣ.

ಕೈಗೆಟಕುವ ಬೆಲೆಯಲ್ಲಿ ಸಿಗುವಂತಹ ಆಟೋಮೆಟಿಕ್ ಕಾರ್ ಗಳು- Below are the Cheapest Automatic Cars available in India.

Maruti Suzuki Alto K10 details - Below are the Cheapest Automatic Cars available in India
Maruti Suzuki Alto K10 details – Below are the Cheapest Automatic Cars available in India

Maruti Suzuki Alto K10 ಸಣ್ಣ ಮತ್ತು ಕಡಿಮೆ ಬೆಲೆಯ ಹಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಮಾರುತಿ ಸುಜುಕಿ ಆಲ್ಟೊ ಕೆ 10 ಕಾರು ಕಾಣಿಸಿಕೊಳ್ಳುತ್ತದೆ. 1.0 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಇದು ಹೊಂದಿದೆ. ಐದು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಇದು ನಿಮಗೆ ಕಾಣಿಸಿಕೊಳ್ಳುತ್ತದೆ. ಇದರ ಬೆಲೆಯ ಬಗ್ಗೆ ಮಾತನಾಡುವುದಾದರೆ 5.59 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

Maruti Suzuki Spresso ಈ ಕಾರ್ ಕೂಡ ನೋಡೋದಕ್ಕೆ ಮೆಕಾನಿಸಂ ವಿಚಾರದಲ್ಲಿ ಆಲ್ಟೋ ಕಾರ ನ್ನೆ ಹೋಲುತ್ತದೆ. ಈ ಕಾರ್ ಕೂಡ 5 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಪ್ಷನ್ ಜೊತೆಗೆ ಬರುತ್ತದೆ. 1.0 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಆಪ್ಷನ್ ಜೊತೆಗೆ ಸಿಗುತ್ತದೆ ಹಾಗೂ ಇದರ ಬೆಲೆ ಕೂಡ ಕೇವಲ 5.76 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ.

Renault kwid- Cheapest Automatic Cars available in India
Renault kwid- Cheapest Automatic Cars available in India

Renault kwid ಭಾರತದ ಟಾಪ್ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಈ ಕಾರ್ ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಈ ಕಾರಿನ ಆಟೋಮೆಟಿಕ್ ವರ್ಷನ್ ಕಾರಿನ ಬೆಲೆ 6.12 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

Maruti Suzuki Celerio 1.0 ಪೆಟ್ರೋಲ್ ಇಂಜಿನ್ ಅನ್ನು ಹೊಂದಿರುವಂತಹ ಈ ಕಾರು ಐದು ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ ಮಿಷನ್ ಜೊತೆಗೆ ನಿಮಗೆ ಸಿಗುತ್ತದೆ. ಈ ಕಾರಿನಲ್ಲಿ ನೀವು 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ಕಾಣಬಹುದಾಗಿದೆ. ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. ಈ ಕಾರಿನ ಆಟೋಮೆಟಿಕ್ ವೇರಿಯಂಟ್ 6.38 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ.

Maruti Suzuki WagonR- Cheapest Automatic Cars available in India
Maruti Suzuki WagonR- Cheapest Automatic Cars available in India

Maruti Suzuki WagonR ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ಇರುವಂತಹ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಇದರಲ್ಲಿ ನಾಲ್ಕು ಸ್ಪೀಕರ್ ಗಳ ಜೊತೆಗೆ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ಪಡೆದುಕೊಳ್ಳಬಹುದು. ಇನ್ನು ಈ ಕಾರಿನ ಆಟೋಮೆಟಿಕ್ ವರ್ಷನ್ 6.55 ಲಕ್ಷಗಳಿಂದ ಪ್ರಾರಂಭವಾಗಲಿದೆ.

Comments are closed.